Saturday 9 March 2013

..ಹೀಗೂ ಒಂದು ಪ್ರೇಮ ಪತ್ರ....



ಪ್ರೀತಿಯೊಂದಿಗೆ ಪೂರ್ಣತೆ ತಂದವಳೇ ,



       ಅಪ್ಪ,ಅಮ್ಮ,ಕಸಿನ್ಸ್ ,ಫ್ರೆಂಡ್ಸ್ ಎಲ್ಲರೂ ಇದ್ದರೂ ಎನೋ ಒಂದು
ಕೊರತೆ ಇತ್ತು ಜೀವನದಲ್ಲಿ..ಕೇಕ್ ಮೇಲೆ ಚೆರ್ರಿ ಮಿಸ್ ಆದಂತೆ,ಕಾಫಿಯಲ್ಲಿ ಕೊಂಚ
ಸಕ್ಕರೆ ಕಡಿಮೆ ಇದ್ದಂತೆ,ಸಿಂಗರಿಸಿಕೊಂಡ ಹೆಣ್ಣು ಕುಂಕುಮವಿಡುವುದ ಮರೆತರೆ ಹೀಗೆ
ಏನೇನೊ ಅಪೂರ್ಣ...ನೀ ಬಂದಾಗ ಅದಕ್ಕೆಲ್ಲಾ ಪೂರ್ಣತೆ ಸಿಕ್ಕಂತೆ,ಜೀವನಕ್ಕೊಂದು ಅರ್ಥ
ಸಿಕ್ಕಿತು ನೀ ನನಗೆ ಸ್ವಂತವಾದ ದಿನವೇ...ನಾವಿಬ್ಬರು ಸೇರಿ ನಡೆಸಿದ ಜೀವನ ಸರಸ
-ವಿರಸಗಳೊಡನೆ  ನೀ ಕರೆಯುತ್ತಿದ್ದಾಗ ಒಮ್ಮೊಮ್ಮೆ ನನ್ನ 'ಜೀ' ಎಂದು, 'ವನ್' ಎಂಬುದು
ಇರದಿದ್ದರೂ ಜೀವನವೊಂತು ಸಂಪೂರ್ಣವಾಗಿತ್ತು...ಈಗ ನಿನ್ನ ಫೇವರೆಟ್ ಹಾಡು ಕೇಳುತ್ತಾ
ಇದ್ದೀನಿ,"ಖೋರ ಕಾಗಜ್ ಥಾ ಮನ್ ಮೇರ ..." ನೀ ನನಗಾಗಿ ಹಾಡುವಾಗೆಲ್ಲಾ ಇನ್ನೂ
ಮಧುರವಾಗಿ ಕೆಳುವುದೇನೂ ಎಂದೆನಿಸುತ್ತಿದೆ...ಇದೆಲ್ಲಾ ಯಾಕೆ ಈ ಪತ್ರದಲ್ಲಿ ಹೇಳ್ತಾ
ಇದ್ದೀನಿ ಅಂತ ಆಶ್ಚರ್ಯನಾ?? ಹೇಳ್ತೀನಿ ಅದಕ್ಕಿಂತ ಮುಂಚೆ ಕೇಳು, "ಇರುವಾಗ ಒಂದು
ಗುಲಾಬಿ ಕೊಡದೆ ನಾ ಹೋದಮೇಲೆ ಗೋರಿಗೆ ಹೂ-ಬೊಕ್ಕೆ ತಂದರೇನು ಫಲ"ಎಂದ್ಯಾರೋ ಅಂದಿದ್ದು
ಕೇಳಿ ನಾವಿಬ್ಬರು ಒಬ್ಬರನೊಬ್ಬರು ನೋಡಿ ಮೌನವಾಗಿ ತಿರುಗಿಕೊಂಡಿದ್ದು.ನೆನಪಿದಿಯಾ
ನಿನಗೆ ಅಂದೇ ನಾ ನಿನಗೆ ತಂದೆ  ಗುಲಾಬಿಯ ಬೊಕ್ಕೆ, ನೀನಾದರೋ ಇನ್ನೂ  ಬುದ್ದಿವಂತೆ
ಗುಲಾಬಿ ಗಿಡಗಳನ್ನೇ ತಂದು ಇಟ್ಟಿದ್ದೆ ಬಾಲ್ಕನಿಯಲ್ಲಿ... ಅಂದೇ ತಿಳಿದಿತ್ತು ಒಂದು
ದಿನದ ಹರ್ಷವಲ್ಲ ಪ್ರೀತಿ,ಪ್ರತೀದಿನ ಒಂದು ತಪ್ಪಿದರೆ ಮತ್ತೊಂದು ಹೂ ಬಿಡುವ
ಗಿಡವಾಗಬೇಕೆಂದು...ಎಷ್ಟೊಂದು ಪಕ್ವತೆ ನಿನ್ನಲ್ಲಿ ಅಬ್ಬಾ!! ಎಷ್ಟೊಂದು ಪ್ರೀತಿ
ನಿನಗೆ  ನನ್ನ ಮೇಲೆ....ಇದ್ದದ್ದರಲ್ಲೇ ತೃಪ್ತಿಯಾಗಿ ಖುಷಿ,ಸಮೃದ್ಧಿ ಇಬ್ಬರನ್ನೂ
ಕೊಟ್ಟೆ,ಅವರಿಬ್ಬರಿಗೆ ನೀ ಹೆಸರಿಟ್ಟಾಗ ಟ್ರೆಂಡಿಯಾಗಿದೆ ಎಂದಿದ್ದೆ,ಈಗ ತಿಳಿತಾ ಇದೆ
ಅವೆರಡನ್ನೂ ಈ ನಿನ್ನ 'ಜೀ'(ವನ್) ಜೀವನದಲ್ಲಿ ಸದಾ ಇರಲಿ ಎಂಬ ಹಾರೈಕೆಯಾಗಿತ್ತು
ಅಲ್ವಾ??.. ನೀನಿಲ್ಲದ ಮೊದಲ "ವ್ಯಾಲೆನ್ಟೈನ್ಸ್ ಡೇ" ಇದು ಅದಕ್ಕೆ ನೋಡು ಈ
ಪತ್ರ,ನಿನಗಾಗಿ ಬರೆದ ಮೊದಲ ಪ್ರೇಮ ಪತ್ರ ...ನಿನ್ನಷ್ಟು ಜೀವನವನ್ನು ಅರ್ಥೈಸಿಲ್ಲ
ನಾನು ಯಾವಾಗಲು ಹೇಳುತಿದ್ದೆ ನೀನು ಪತ್ರವೊಂದ ಬರೆಯಲು ನೀನಿರುವಾಗ ಬರೆಯಲಿಲ್ಲ..ಈಗ
ಬರೆಯುತಿದ್ದೇನೆ ...  ನಿನ್ನಿಷ್ಟದಂತೆ ಕೊನೆಗೂ ಪ್ರೇಮ ಪತ್ರ ಬರೆದೆ
ಕಣೆ......ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು,ಹ್ಯಾಪಿ ವ್ಯಾಲೆನ್ಟೈನ್ಸ್ ಡೇ
ಸಂತೃಪ್ತಿ ಅಂಡ್ ಐ ಲವ್ ಯು .....ಅಂದುಕೊಂಡಿದ್ವಿ ಅಲ್ವಾ ದಿನಕ್ಕೊಂದು ಬಾರಿ ಏನೇ
ಆದರೂ ಇದನ್ನು ಹೇಳಲೇ ಬೇಕಂತ  ಈಗಲೂ ನಾನೊಂತು ತಪ್ಪಿಸಿಲ್ಲ ...ನೀನೂ ತಪ್ಪಿಸಿರಲ್ಲ
ಅಂದುಕೊಂಡಿದ್ದೀನಿ...     ...ಹೆಸರಿಗೆ ತಕ್ಕಂತೆ ಸಂಪೂರ್ಣತೆ ಮತ್ತು ತೃಪ್ತಿಯನ್ನು
ತಂದು ಕೊಟ್ಟಿ ದಕ್ಕಾಗಿ  ಮತ್ತೊಮ್ಮೆ ಥ್ಯಾಂಕ್ಸ್...ನೀನಿಲ್ಲದೆ ಜೀವನ ಮತ್ತೆ
ಅಪೂರ್ಣತೆಯೆಡೆಗೆ ವಾಲಿದೆ,ಆದರೆ ನೀನಿದ್ದ ನನ್ನ ಪೂರ್ಣತೆಯ ಜೀವನ ಮರೆತುಹೋಗುವ ತನಕ
ಬರೆಯುವೆ..ನಿನಗಾಗಿ ಪತ್ರಗಳನ್ನು ಬರೆಯುತ್ತಲೇ ಇರುವೆ..ಹೌದು ನಿನ್ನಾಣೆ ತೃಪ್ತಿ...


                                                                                                        
                                                                                                                 ಜೀವನ್....

                                  

3 comments:

  1. "ನಿನ್ನಿಷ್ಟದಂತೆ ಕೊನೆಗೂ ಪ್ರೇಮ ಪತ್ರ ಬರೆದೆ
    ಕಣೆ..." ಎನ್ನುವ ಪ್ರೇಮಿ ಸಿಗುವುದೇ ಕಷ್ಟ ಅಲ್ಲವೇ.

    ಒಟ್ಟಾರೆ ನಮಗೂ ಯಾವುದೋ ನೆನಪು ಕೆಣಕುವ ಇಂತಹ ಪ್ರೇಮ ಪತ್ರಗಳಿರಲಿ ಸದಾ ಅಂಚೆಯಲ್ಲಿ.

    ReplyDelete