.
"ಜಾಣಮರಿ ಅಲ್ವಾ ನೀನು, ತಿನ್ನು ಪುಟ್ಟ ಪ್ಲೀಸ್ ಇದೊಂದು ತುತ್ತು....", ಎಂದು ತನ್ನ ಮಗಳ ಬಾಯಿಗೆ ದೋಸೆ ತುರುಕುತ್ತಾ ಹೇಳಿದಳು ನಿಯತಿ.ಬೇಗ ಬೇಗ ಮಗಳನ್ನು ಶಾಲೆಗೆ ಹೊರಡಿಸಿ ಬಸ್ ಹತ್ತಿಸಿ ಬಂದು ಸೋಫಾ ಮೇಲೆ ಒರಗಿದ್ದಷ್ಟೇ ಫೋನ್ ಅಳಲಾರಂಭಿಸಿತು. 'ಹಲೋ... ' ಎಂದಿದ್ದಷ್ಟೇ ಆ ಕಡೆಯಿಂದ " ಹಲೋ ನಾನು ಕಣೆ ಅನನ್ಯ... ಹೇಗಿದ್ದೀಯ? ನಾನು ಹೇಳಿದ್ದೆನಲ್ಲ ನೀನು ಪುಟ್ಟಿ ಇಲ್ಲಿಗೆ ,ಲಂಡನ್ಗೆ ಬಾರೋ ವಿಷ್ಯ, ಟಿಕೆಟ್ ಬುಕ್ ಆಗಿದೆ ವೀಸಾ ಬರಬಹುದು ಇವತ್ತು . ಪುಟ್ಟಿಯ ಸ್ಕೂಲ್ ವ್ಯವಸ್ತೆಯೂ ಆಯಿತು ಬೇಗ ಪ್ಯಾಕಿಂಗ್ ಶುರು ಮಾಡು .. ಲಂಡನ್ ಏರ್ ಪೋರ್ಟ್ ನಲ್ಲಿ ಸಿಗೋಣ ಸರಿನಾ? ಇಡ್ತೀನಿ ನನ್ನ ಕ್ಯಾಬ್ ಬಂತು ಬೈ ಟೇಕ್ ಕೇರ್ .." ಆ ಕಡೆಯಿಂದ ಬೀಪ್ ಶಬ್ದ ಬರಲಾರಂಭಿಸಿತು.ಫೋನ್ ಇಟ್ಟ ನಿಯತಿ ಏಕೋ ಎದ್ದು ಕನ್ನಡಿ ಮುಂದೆ ನಿಂತಳು.ಅದೇ ಮುಖ,ಅದೇ ಕಣ್ಣೇರು ಬತ್ತಿದ ಕಂಗಳು ,ಅದೇ ಬಣ್ಣವಿಲ್ಲದ ಹಣೆ,ಖಾಲಿಯಾದ ಕುತ್ತಿಗೆ..ಅವಳನ್ನು ಯೋಚನೆಗಳು ಭೂತ ಕಾಲಕ್ಕೆ ಇವಲಿಷ್ಟವಿಲ್ಲದೆಯೇ ಕರೆದೊಯ್ಯಿತು..ನಿಯತಿ ,ಅನನ್ಯ ಪ್ರಾಣ ಸ್ನೇಹಿತೆಯರು.ಉದಾಹರಣೆ ಕೊಡುವಂತ ಸ್ನೇಹ ಅವರದು . ಅನನ್ಯಾಳಿಗೆ ತನ್ನ ಗೆಳತಿ ತನ್ನೊಂದಿಗೆ ಇರಲೆಂದು ತನ್ನ ಅಣ್ಣನಿಗೆ ಕೊಟ್ಟು ಮದುವೆ ಮಾಡಿಸಿದಳು .ದೊಡ್ಡವರ ತಕರಾರು ಏನು ಇಲ್ಲದಿದ್ದರಿಂದ ಮದುವೆಯೂ ಸುಸೂತ್ರವಾಗೆ ನಡೆಯಿತು.ವಿವಾಹವಾಗಿ ಎರಡು ವರುಷಗಳಷ್ಟೇ, ಎಲ್ಲಾ ವಿಧಿಯಾಟ ನಿಯತಿಯ ಗಂಡ ಕಾರ್ ದುರಂತವೊಂದರಲ್ಲಿ ಇವರೆನ್ನೆಲ್ಲಾ ಬಿಟ್ಟು ಬರಲಾರದಷ್ಟು ದೂರ ಹೋದ.ನಿಯತಿಗೊಂತು ಆಗ ಅನನ್ಯಳಲ್ಲದೆ ಬೇರಾರೂ ಇರಲಿಲ್ಲ .ಇಬ್ಬರೂ ಅವನ ಯೋಚನೆಯಲ್ಲೇ ಒಂದು ವರ್ಷ ಹೇಗೋ ದೂಡಿದ್ದರು. ಅನನ್ಯಾಳಿಗೆ ಆಗ ಲಂಡನ್ ನಲ್ಲಿ ಒಳ್ಳೆ ಕೆಲಸವೊಂದು ಸಿಕ್ಕಿ ನಿಯತಿಗೂ ಅವಳ ಮಗುವಿಗೂ ಇಲ್ಲಿ ಎಲ್ಲಾ ವ್ಯವಸ್ಥೆ ಮಾಡಿ ಹೋಗಿದ್ದಳು.ಕುಕ್ಕರಿನ ಸದ್ದಿಗೆ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಿಯತಿ ಅಡುಗೆ ಮನೆಯತ್ತ ಓಡಿದಳು.ನಿಯತಿಯ ಯೋಚನೆಗಳು ಇಲ್ಲಿ ಹೀಗಾದರೆ ಅಲ್ಲಿ ಅನನ್ಯಾ ಕುಉದ ಕ್ಯಾಬ್ನಲ್ಲಿ ಕೂತು ಇವರದೇ ಯೋಚನೆ ಮಾಡುತ್ತಿದ್ದಳು .ಅವಳಿಗೆ ಕಾಡುತ್ತಿದ್ದ ದುಃಖ ಒಂದೇ ತನ್ನ ಗೆಳತಿಯ ಜೀವನಕ್ಕೆ ತಾನೇ ಮುಳ್ಳಾದೆನಲ್ಲಾ ಎಂಬುದು..ತಾನು ಅಂದು ಅವಳನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸದಿದ್ದರೆ ಹೀಗೆ ದುಃಖದ ಸಾಗರದಲ್ಲಿ ಈಜುವ ಅವಶ್ಯಕತೆ ಇಲ್ಲವೆಂದು..
ಕೊನೆಗೂ ಆ ದಿನ ಬಂದೆ ಬಿಟ್ಟಿತು. ನಿಯತಿ ಮತ್ತು ಪುಟ್ಟಿ ಇಬ್ಬರೂ ಲಂಡನ್ನಿನ ಏರ್ ಪೋರ್ಟ್ ಗೆ ಬಂದಿಳಿದರು. ಇವರು ಬರುವ ಮುನ್ನವೇ ಅನನ್ಯ ಇವರಿಗಾಗಿ ಕಾಯುತ್ತಾ ನಿಂತಿದ್ದಳು.ಎಷ್ಟೋ ದಿನದ ಬಳಿಕ ನೋಡುತ್ತಿದ್ದರಿಂದ ಇಬ್ಬರ ಕಣ್ಣಿನಿಂದಲೂ ಸುರಿಯುತಿದ್ದ ನೀರು ಮಿಲನದ ಸಂತೋಷವನ್ನು ವ್ಯಕ್ತ ಪಡಿಸುತಿತ್ತು. ಪುಟ್ಟಿಯನ್ನು ಅನನ್ಯಾಳೆ ಎತ್ತುಕೊಂಡು ಕಾದಿರಿಸಿದ್ದ ಕ್ಯಬ್ನಲ್ಲಿ ಕೂತರು. ಮನೆ ತಲುಪಿ ಅರ್ಧ ಘಂಟೆ ಆದಾಗ ಅನನ್ಯಾಳ ಮನೆ ಡೋರ್ ಬೆಲ್ ಸದ್ದಾಯಿತು.ಬಾಗಿಲು ತೆರೆಯುತ್ತಲೇ "ಹಾಯ್ ನಕುಲ್ ಕಮ್ ಕಮ್ ಇನ್ ಸೈಡ್ " ಎನ್ನುತ್ತಾ ನಿಯತಿಯ ಕಡೆ ತಿರುಗಿ "ನಿಯತಿ ಹಿ ಇಸ್ ನಕುಲ್ ನನ್ನೊಟ್ಟಿಗೆ ಕೆಲಸ ಮಾಡ್ತಾನೆ ಮೈ ಬೆಸ್ಟ್ ಫ್ರೆಂಡ್ ಇನ್ ಲಂಡನ್" ಎಂದು ಅವನ ಕಡೆ ತಿರುಗಿ , " ನಕುಲ್ ದಿಸ್ ಇಸ್ ನಿಯತಿ ನಾನ್ ಹೇಳಿದ್ನಲ್ಲ ಅತ್ತಿಗೆ ಕಮ್ ಫ್ರೆಂಡ್ ಅಂತ ಇವಳೇ " ಅವರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ಹಾಯ್ ಹೇಳಿದರು. "ಒಂದ್ ನಿಮಿಷ ಈಗಲೇ ಕಾಫಿ ತರ್ತೀನಿ ಮಾತಾಡ್ತಾ ಇರಿ ",ಎಂದು ಅಡುಗೆ ಮನೆಯತ್ತ ನಡೆದಳು ಅನನ್ಯ.ಮೂವರು ಕಾಫಿ ಸವಿಯುತ್ತಾ ಹರಟುತಿದ್ದಾಗ ಅವನಿಗೆ ಕೆಲಸದ ಕರೆ ಬಂದು ಹೊರಟು ಹೋದನು.ಅನನ್ಯ ನಿಯತಿ ಇಬ್ಬರೂ ಅಡುಗೆ ಮನೆಯತ್ತ ಹೊರಟರು.ಎಲ್ಲಾ ಹೊಸ ವಾತಾವರಣ ನಿಯತಿಯ ಬದುಕಿನಲ್ಲಿ ನವ ಚೈತನ್ಯ ತಂದಿತ್ತು. ಬದುಕುವುದನ್ನೇ ಮರೆತ ಅವಳು ಸ್ವಲ್ಪ ಗೆಳುವಾಗಿರುವುದನ್ನು ಕಂಡ ಅನನ್ಯಾಗೊಂತೂ ಎಲ್ಲಿಲ್ಲದ ಸಂತೋಷ..ಅನನ್ಯಾಳ ಗೆಳೆಯನಾಗಿದ್ದ ನಕುಲ್ ನಿಯತಿಗೂ ಆಪ್ತನಾಗುವುದರಲ್ಲಿ ಸಮಯ ಹಿಡಿಯಲಿಲ್ಲ .ಅನನ್ಯ ಕೆಲಸದಲ್ಲಿ ಮುಳುಗಿದ್ದಾಗ ನಿಯತಿಗೆ ಊರು ತೋರಿಸಿದ್ದು ಇವನೇ..ಅವಲಿಲ್ಲದ್ದಾಗ ಇವಳಿಗೆ ಜೋತೆಯಾಗಿದ್ದವನೂ ಇವನೇ.ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಹಲವ್ವಾರು ಸನ್ನಿವೇಶಗಳೂ ಬಂದಿದ್ದವು.ಹಾಗೆ ಒಬ್ಬರನೊಬ್ಬರು ಹಚ್ಚಿ ಕೊಳ್ಳುವುದಕ್ಕೂ ಸಮಯ ಹಿಡಿಯಲಿಲ್ಲ.
ಅಂದು ನಕುಲ್ ನ ಹುಟ್ಟುಹಬ್ಬವಿತ್ತು .ನಿಯತಿ ಅನನ್ಯಾರನ್ನು ಅವನು ಖುದ್ದಾಗಿ ಅವನ ಪಾರ್ಟಿಗೆ ಕರೆದಿದ್ದ.ಪಾರ್ಟಿ ಬಹಳ ಜೋರಾಗೆ ಹಮ್ಮಿಕೊಂಡಿದ್ದ.ಪಾರ್ಟಿಯ ನಡುವೆ ಅನನ್ಯಾಳನ್ನು ಕರೆದು ,"ನಿನ್ನ ಅತ್ತಿಗೆಯನ್ನು ನಾನು ಬಹಳ ಇಷ್ಟಪಡುತ್ತೇನೆ ಅವಳನ್ನು ನಾನು ಮದುವೆಯಾಗಬಹುದ??"ಎಂದು ಕೇಳಿದ ಅವಳು ಕಕ್ಕಾಬಿಕ್ಕಿಯಾಗಿ "ಆದರೆ ನಿಯತಿ...",ಇನ್ನೂ ಅವಳು ಮುಗಿಸಿಯೇ ಇರಲಿಲ್ಲ ಅವನು ನಿಯತಿಯನ್ನು ಕರೆದು ಕೇಳಿಯೇ ಬಿಟ್ಟ. ನಿಯತಿಯ ಕಣ್ಣಲ್ಲಿ ಮಿಂಚಿದ ಸಂತೋಷ , ಎಷ್ಟೋ ವರ್ಷಗಳಿಂದ ಹಾತೊರೆಯುತ್ತಿದ್ದ ಪ್ರೀತಿ ಸಿಕ್ಕ ಖುಷಿ ಕನ್ನಿನಿದ ಹರಿಯಿತು ಸರಿ ಎಂದು ತಲೆಯಾಡಿಸುತ್ತಾ ಅನನ್ಯಾಳನ್ನು ತಬ್ಬಿದಳು ಇಬ್ಬರ ಸಂತೋಷದ ಧಾರೆ ಹರಿದಮೇಲೆ ಅನನ್ಯ,"ಶಿ ಇಸ್ ಪರ್ ಫೆಕ್ಟ್
ಫಾರ್ ಯು ಮದುವೆ ಯಾವಾಗ ಇಟ್ಟುಕೊಳ್ಳೋಣ?" ಎಂದಳು ಕಣ್ಣೇರು ಒರೆಸುತ್ತಾ...ಅವನು 'ಇವತ್ತೇ..' ಎನ್ನುತ್ತಾ ಉಂಗುರ ತೆಗೆದು ತೊಡಿಸಿಯೇ ಬಿಟ್ಟ. ಅತಿಥಿಗಳೆಲ್ಲ ಬಂದು ಇಬ್ಬರಿಗೂ ಶುಭಾಶಯ ಹೇಳತೊಡಗಿದರು. ಎಲ್ಲಾ ಮುಗಿದ ಮೇಲೆ ಅನನ್ಯಾ ನಿಯತಿ ಹಾಗು ಪುಟ್ಟಿ ಎಲ್ಲರೂ ಮನೆಗೆ ಹೊರಟರು...ನಿಯತಿಯನ್ನು ಮನೆಯ ಬಾಗಿಲ ಬಳಿ ಬಿಟ್ಟು ,ಅನನ್ಯಾ " ತಗೋ ಮನೆ ಬೀಗ ,ನಾನೀಗ ಬರ್ತೀನಿ ಏನೋ ಕೆಲಸ ನೆನಪಾಯಿತು ಹುಷಾರು ",ಎಂದು ಮಲಗಿದ್ದ ಪುಟ್ಟಿಯನ್ನು ಅವಳ ಭುಜಕ್ಕೆ ಹಾಕಿ ಕಾರ್ ತೆಗೆದುಕೊಂಡು ಹೊರಟಳು...ಕಾರ್ ಲಂಡನ್ ನಗರ ಪ್ರದೇಶ ಬಿಟ್ಟು ಓಡುತ್ತಲೇ ಇತ್ತು,ಒಂದು ಪ್ರಶಾಂತ ನದಿ ದಂಡೆಯ ಬಳಿ ನಿಲ್ಲಿಸಿ ಕಾರಿನಿಂದ ಕೆಳಗಿಳಿದು ನಿಂತಳು. ಡಿಕ್ಕಿಯಲ್ಲಿಟ್ಟಿದ್ದ ಉಡುಗೊರೆಯನ್ನು ಹೊರತೆಗೆದಳು.ಅದರೊಂದಿಗಿದ್ದ ಗ್ರೀಟಿಂಗ್ ಕಾರ್ಡನ್ನು ತೆಗೆದು ಇಣುಕಿದಳು ತಾನೇ ನಕುಲ್ ಗಾಗಿ ರಾತ್ರಿಯಲ್ಲಿ ಕುಳಿತು ಬರೆದ ಮುದ್ದಾದ ಅಕ್ಷರದ ಪತ್ರ ,ಅದರ ಸಮೇತ ಕ್ಷಣಾರ್ಧದಲ್ಲಿ ಹರಿದು ಎಸೆದಳು . ಅವನಿಗೆನ್ದೆ ತೆಗೆದುಕೊಂಡ ಹುಡುಗ ಹುಡುಗಿಯ ಮೂರ್ತಿ ಅದರ ಮೇಲೆ ಬರೆದಿದ್ದ ಮುಉರು ಪದಗಳ ಪ್ರೀತಿಯ ಮಾತು ಎಲ್ಲವನ್ನೂ ಎದೆಗೊತ್ತಿ ಮಗುವಂತೆ ಅಳಲಾರಂಭಿಸಿದಳು. ಕನೀರ ಕೊಡಿ ಮುಗಿದ ನಂತರ ಅವಳೇ ಸಮಾಧಾನ ತಂದುಕೊಂಡು ನದಿಯ ಆ ಕಡೆ ಕಾಣುತಿದ್ದ ಬೆಳಕಿನ ಕಟ್ಟಡಗಳ ಪ್ರತಿಬಿಂಬದ ಕಡೆ ದೃಷ್ಟಿ ನೆಟ್ಟಳು .ಆ ಕಣ್ಣಲ್ಲಿದ್ದ ನೋವನ್ನು ಯಾವುದೋ ಒಂದು ಮನದ ಮೂಲೆಯಲ್ಲಿದ್ದ ಖುಷಿ ಆವರಿಸಲಾರಂಭಿಸಿತು. ಅದೇ ಅವಳ ಪ್ರಾಣ ಸ್ನೇಹಿತೆಗೆ ಹೊಸ ಬದುಕು ಸಿಕ್ಕ ಖುಷಿ ಪುಟ್ಟಿಗೆ ಒಳ್ಳೆ ತಂದೆ ಸಿಕ್ಕ ಖುಷಿ... ಎರಡರ ನಡುವೆ ಇವಳ ದುಃಖ ಅಣುವಾಗಿ ಬಿಟ್ಟಿತು . ತಾನು ಪ್ರೀತಿಸಿದ ನಕುಲ್ ನನ್ನು ತನ್ನ ಮನಸ್ಸಿನ ಅರಮನೆಯಿಂದ ಕಿತ್ತಿಡಲಾಗದೆ ಆ ಮನದ ಕೊನೆಗೆ ಕೀಲಿಕೈ ಇಲ್ಲದ ಬೀಗ ಜಡಿದು ಮತ್ತೆ ಕಾರ್ ಹತ್ತಿದಳು.........
u should seriously think about turning into a full time author, can see the potential here.. trust me!!
ReplyDeletethanks a lot avinash:):)thank u:)
ReplyDeleteಚಿಕ್ಕದಾದ, ಚೊಕ್ಕವಾದ ಕಥೆ.
ReplyDeleteಧನ್ಯವಾದಗಳು:):)
Deleteನಿಯತಿ ಹಾಗು ಅನನ್ಯರ ನಡುವಿನ ಸ್ನೇಹಕೂ ಮೀರಿದ ಬಂಧವನ್ನು ಪದಗಳಲ್ಲಿ ಚನ್ನಾಗಿ ಹಿಡಿದಿಟ್ಟಿದ್ದೀರಿ. ನಿಯತಿಗೊಸ್ಕರ ಅನನ್ಯ ಮಾಡುವ ತನ್ನ ಪ್ರೇಮದ ತ್ಯಾಗ ಎಲ್ಲರ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ನಕುಲ್ ನ ವಿಶಾಲ ಹೃದಯ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತದೆ. ಸರಳವಾಗಿ ಓದಿಸಿಕೊಂಡು ಹೋಗುವ ಗುಣ ನಿಮ್ಮ ಕಥೆಗಿದೆ. ಹಾಗೆ ನೀವು ಕಾಗುಣಿತ ದೋಷದ ಕಡೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಬ್ಲಾಗಿಗೆ ಹೋಗಿ ಓದಬೇಕಾದಾಗ ಅಕ್ಷರಗಳು ಕಲಸಿದಂತೆ ಭಾಸವಾಗುತ್ತವೆ. ದಿಟ್ಟಿಸಿನೋಡಿದರೆ ಕಣ್ಣು ಮಂಜಾಗುತ್ತದೆ. ಆದ್ದರಿಂದ ದಯವಿಟ್ಟು ಬ್ಲಾಗಿನ ಡಿಜೈನ್ ಚೇಂಜ್ ಮಾಡಿ. ಅಕ್ಷರಗಳು ಕಪ್ಪಾಗಿದ್ದು ಹಿನ್ನೆಲೆ ಬಿಳಿ ಅಥವಾ ತಿಳಿಬಣ್ಣ ದ್ದಾಗಿದ್ದರೆ ಈ ಸಮಸ್ಯೆ ಇರೋಲ್ಲ. ದಯವಿಟ್ಟು ತಪ್ಪು ತಿಳಿಯಬೇಡಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ ಅಷ್ಟೇ. ಉದಾ; ಸುಮ್ಮನೆ ನನ್ನ ಬ್ಲಾಗನ್ನು ಒಮ್ಮೆ ನೋಡಿ ಸರಳವಾಗಿದೆ. ವಂದನೆಗಳು. http://satishramanagara.blogspot.in/
ReplyDeleteಧನ್ಯವಾದ ಸರ್:)ಖಂಡಿತವಾಗಿಯೂ ಗಮನಿಸುತ್ತೇನೆ.
DeleteThis comment has been removed by the author.
ReplyDeleteಬದುಕು ಎಂದರೆ ಕೆಲವೊಮ್ಮೆ ಹೀಗೆ ತಿರುವುಗಳನ್ನು ಸೃಷ್ಟಿಸಿ ಬಿಡುತ್ತದೆ. ಅನನ್ಯಳ ಮನಸಿನೊಳಗೆ ಅದುಮಿಟ್ಟ ಪ್ರೀತಿ ಕೊನೆಗೂ ಯಾರಿಗೂ ತಿಳಿಯದಂತೆ ಸ್ನೇಹದ ಪುಟಗಳಲ್ಲಿ ತ್ಯಾಗವಾಗಿಬಿಡುತ್ತದೆ. ಕಥೆಗೆ ಅಂತ್ಯ ಕೊಡುವಲ್ಲಿ ಯಶಸ್ವಿ ನೀವು ಶೀತಲ್. ಅತ್ಯುತ್ತಮ ಕಥೆ ಚಿಕ್ಕ ಮತ್ತು ಚೊಕ್ಕವಾಗಿ.
ReplyDeleteಅಲ್ಲಲಿ ಕಾಗುಣಿತ ದೋಷಗಳು ಕಂಡವು. ಸರಿಪಡಿಸಿ.
ಧನ್ಯವಾದ ಸರ್:)ಖಂಡಿತವಾಗಿಯೂ ಗಮನಿಸುತ್ತೇನೆ.
ReplyDeleteಕಥೆಯು ತುಂಬಾ ಭಾವನಾತ್ಮಕವಾಗಿ ಮೂಡಿ ಬಂದಿದೆ .. ಹಾಗು ಪ್ರೇಮದ ಆಲೋಚನೆಯ ಅದಲು ಬದಲು ಗೊಂದಲಗಳ ವಿಚಾರ ತುಂಬಾ ಸೊಗಸಾಗಿ ಪ್ರಸ್ತುತಪಡಿಸಿದ್ದೀರಾ.. ಆದರೆ ನಿರೂಪಣೆಯಲ್ಲಿ ಸ್ವಲ್ಪ ಪಾತ್ರ ಪರಿಚಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು .. ಹಾಗೂ ಕ್ರಿಯೆಗಳು ಮತ್ತು ಸಂಭಾಷಣೆಗಳ , ಸಾಲುಗಳ ವಿಭಜನೆ ಸರಿಯಾಗಿ ಆಗಬೇಕು .. ನೀವೇ ಆಗಾಗ ಓದಿಕೊಂಡು ಪದಗಳ ಕಾಗುಣಿತ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು .. ಇನ್ನು ಕಥೆಯ ವಿಚಾರದಲ್ಲಿ ಇಲ್ಲಿ ಮಗುವಿಗೂ ಮತ್ತು ನಕುಲ್`ನಿಗೂ ಒಂದು ಬಗೆಯ ಮುದ್ದಾದ ಸನ್ನಿವೇಶ ಮಾಡಿಕೊಡಬೇಕಿತ್ತು .. ಅದನ್ನು ಕಂಡ ಅನನ್ಯ ಹಾಗು ನಿಯತಿ ಇಬ್ಬರು ನಕುಲ್ ತೀರ್ಮಾನದ ಬಗ್ಗೆ ಆಲೋಚನೆ ಮಾಡುವಂತೆ ಆಗಬೇಕು.. ಹಾಗು ಕಥೆಯ ಆರಂಭ ಮತ್ತು ಅಂತ್ಯ ಮಾತ್ರ ಇಲ್ಲಿದೆ ಹಾಗು ನಕುಲ್ ಮತ್ತು ನಿಯತಿಯ ನಡುವಿನ ಒಂದೆರಡು ಸುಮಧುರ ಸನ್ನಿವೇಶಗಳನ್ನು ಕೊಟ್ಟಿದ್ದರೆ ಕಥೆಯಲ್ಲಿ ಮತ್ತಷ್ಟು ಕುತೂಹಲ ಇರುತಿತ್ತು .. ಇದು ನಮ್ಮ ಅನಿಸಿಕೆ ಮಾತ್ರ .. ಆದರೆ ಈಗ ಇರುವ ಕಥೆಯು ಉತ್ತಮವಾಗಿಯೇ ಮೂಡಿ ಬಂದಿದೆ .. ತುಂಬಾ ಇಷ್ಟವಾದ ಕಾರಣ ಸ್ವಲ್ಪ ಹೆಚ್ಚಿನ ಬಿಡುವಿನ ಸಮಯ ಮಾಡಿಕೊಂಡು ವಿವರವಾಗಿ ಉತ್ತರಿಸುತ್ತೇವೆ ಎಂದು ಹೇಳಿದ್ದು .. ಹಾಗು ಮತ್ತೊಂದು ಅನಿಸಿಕೆ ನಿಮ್ಮ ಬ್ಲಾಗ್ ಬಣ್ಣವನ್ನು ಬದಲಾಯಿಸಿದರೆ ಓದಲು ತುಂಬಾ ತಂಪು ಹಾಗು ಹಿತವಾದ ಅನುಭವ ಕೊಡುತ್ತದೆ.. ಒಮ್ಮೆ ನೀವೇ CTRL+A ಒತ್ತಿ ನೋಡಿ ಆಗ ನೀಲಿ ಬಣ್ಣದ ಮೇಲೆ ಅಕ್ಷರಗಳು ತುಂಬಾ ಚೆಂದವಾಗಿ , ಸೊಗಸಾಗಿ ಕಾಣುತ್ತವೆ.. ಈ ಬಣ್ಣಗಳ ಬಗ್ಗೆ ಎಲ್ಲರ ಬ್ಲಾಗ್ ಅಲ್ಲೂ ಒಂದಲ್ಲಾ ಒಂದು ರೀತಿಯ ಸಮಸ್ಯೆ ಇದ್ದೇ ಇರುತ್ತದೆ .. ಅದಕ್ಕಾಗಿ ನಾವು ಏನೇ ಹೆಚ್ಚಾಗಿ ಓದುವುದು ಇದ್ದಲ್ಲಿ CTRL+A ಒತ್ತಿ .. ನೀಲಿ ಬಣ್ಣದ ಹಿನ್ನೆಲೆಯಲ್ಲಿ ಅಕ್ಷರಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಂಡು ಓದುತ್ತೇವೆ.. ಹಾಗು ಚಿಕ್ಕದಾಗಿ ಇದ್ದಲ್ಲಿ ಅದನ್ನು CTRL ಮತ್ತು + ಒತ್ತುತ್ತಾ ದೊಡ್ಡದಾಗಿ ಮಾಡಿಕೊಂಡು ಓದುತ್ತೇವೆ.. ನೀವು ನಮ್ಮ ಕೆಲವು ಅನಿಸಿಕೆಗಳ ಕಡೆಗೆ ಸ್ವಲ್ಪವಾದರೂ ಗಮನ ಕೊಡಿ ಹಾಗು ಇನ್ನಷ್ಟು ಕಥೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಾ , ನಿಮಗೆ ಶುಭ ಕೋರುತ್ತೇವೆ .. ಭಾವನೆಗಳ ಲೋಕದಲ್ಲಿ ನಮ್ಮನ್ನು ಕರೆದುಕೊಂಡು ಹೋದ ಈ ಕಥೆಯನ್ನು ಮತ್ತೊಮ್ಮೆ ಓದುತ್ತಾ , ಇದಕ್ಕೆ ಮತ್ತೊಮ್ಮೆ ಮೆಚ್ಚುಗೆಯ ಮಾತುಗಳನ್ನು ತಿಳಿಸಲು ತುಂಬಾ ಖುಷಿ .. ನಮ್ಮ ಪ್ರತಿಕ್ರಿಯೆಗಳನ್ನು ಅಪೇಕ್ಷಿಸಿ ಕಾದಿದ್ದ ನಿಮಗೆ ಧನ್ಯವಾದಗಳನ್ನು ಸಹ ತಿಳಿಸುತ್ತೇವೆ .. :) :)
ReplyDelete|| ಪ್ರಶಾಂತ್ ಖಟಾವಕರ್ ||
ಧನ್ಯವಾದ ಸರ್:)
Deleteಓದುಗರನ್ನು ಹಿಡಿದಿಟ್ಟುಕೊಳ್ಳುವ ಸುಂದರ ಕತೆ ...
ReplyDeletehttp://nenapinasanchi.wordpress.com/
ಧನ್ಯವಾದ ಸರ್:)
Deleteಕಥೆ ಚೆನ್ನಾಗಿದೆ ಶೀತಲ್ ಅಕ್ಕ... ಇಷ್ಟವಾಯಿತು..
ReplyDeleteಧನ್ಯವಾದ:)
Delete