ಪ್ರಾಜೆಕ್ಟ್ ಎಲ್ಲಾ ಮುಗಿಸಿ ಬೆಂಗಳೂರಿಂದ ಶಿವಮೊಗ್ಗೆಗೆ ರಾತ್ರಿ ಹನ್ನೊಂದು ಗಂಟೆಗೆ ಬಸ್ ಹತ್ತಿದೆ.ನನ್ನ ಸೀಟ್ ಮೊದಲೇ ರಿಸೆರ್ವ್ ಮಾಡಿದ್ದರಿಂದ ನಿಗದಿತವಾದ ಸ್ಥಳದಲ್ಲಿ ಹೋಗಿ ಕುಳಿತೆ.ಅದು ಐರಾವತ ಬಸ್ ಆದ್ದರಿಂದ
ಹೆಸರೇ ಸುಉಚಿಸುವಂತೆ ಬಹಳ ಎತ್ತರ ಹಾಗು ಸುಂದರವಾಗಿತ್ತು . ಅಲ್ಲಿ ಎಲ್ಲಾ ರಿಸೆರ್ವ್ ಮಾಡಿದ್ದ ಸೀಟ್ ಗಳೇ ಎಲ್ಲ ಪ್ರಯಾಣಿಕರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತರು. ನನ್ನ ಪಕ್ಕದ ಸೀಟ್ ಮಾತ್ರ ಖಾಲಿ ಇತ್ತು. ಎಕ್ಸ್ ಪ್ರೆಸ್
ಬಸ್ ಆದ್ದರಿಂದ ಕೆಲವೇ ಊರುಗಳಲ್ಲಿ ನಿಲ್ಲಿಸುವುದೆಂದು ಕಂಡಕ್ಟರ್ ಹೇಳಿದ್ದರಿಂದ ಮುಂದೆ ಯಾರಾದರೂ ಹತ್ತಬಹುದೆಂದುಕೊಂಡು ಮೊಬೈಲಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳುತ್ತಾ ಹಾಗೆ ಸೀಟನ್ನು ಹಿಂದಕ್ಕೊರಗಿಸಿದೆ.
ಮನಸ್ಸು ಹಾಡಿನಲ್ಲಿ ಮೈಮರೆತು ಕಣ್ಣುಗಳು ಕನಸಿನ ಲೋಕಕ್ಕೆ ಅಣಿಯಾಗತೊಡಗಿದವು . ಒಂದೂವರೆ ಗಂಟೆ ಕಳೆದಿರಬೊಹುದು ಬಸ್ ಗೆ ಬ್ರೇಕ್ ಬಿಟ್ಟು ಹಾಗೆ ನನ್ನ ಕನಸಿಗೂ ಸಹ. ಎದ್ದು ಕಿಟಕಿಯಿಂದ ಕಣ್ಣಾಯಿಸಿದೆ ಕಟ್ಟಲು ಬಿಟ್ಟು ಬೇರೇನೂ
ಕಾಣಲಿಲ್ಲ . ಯಾವ ಊರೆಂದೂ ನೋಡಲಾಗಲಿಲ್ಲ. ಅಷ್ಟರಲ್ಲೇ ಕಂಡಕ್ಟರ್ ರೈಟ್ ಎಂದ.ಇನ್ನೇನು ಮತ್ತೆ ಕಣ್ಣು ಮುಚ್ಚಬೇಕೆನ್ನುವಷ್ಟರಲ್ಲಿ ಒಬ್ಬಳು ಹುಡುಗಿ ಬಂದು ಪಕ್ಕದಲ್ಲಿ ಕುಳಿತಳು. ನೋಡಲು ಬಹಳ ಸುಂದರಿ . ಅವಳ ಅಂದವನ್ನು ನೋಡುತ್ತ
ಹಾಗೆ ಕುಳಿತೆ..ಅವಳು ತನ್ನ ಸಾಮಾನುಗಳನ್ನು ಕಾಲಡಿ ಇಟ್ಟು ಶಾಲು ಹೊದ್ದುಕೊಂಡು ಕುಳಿತಳು. ನನಗೆ ಅವಳ ಬಳಿ ಮಾತನಾಡುವ ಆಸೆಯಾಯಿತು ಹೀಗೆ ಶುರು ಮಾಡಲಿ ಎಂದು ಯೋಚಿಸುತ್ತಿರುವಾಗಲೇ ಏನೋ ಹೊಳೆದಂತಾಗಿ
'ಯಾವ ಊರಿನಿಂದ ಹತ್ತಿದಿರಿ ?' ಎಂದೆ. ಅವಳು ಅದು ಯಾವ ಊರ ಹೆಸರು ಹೇಳಿದಳೋ ಗೊತ್ತಾಗಲಿಲ್ಲ ಧ್ವನಿ ಸಂಗೀತದಂತಿದ್ದರಿಂದ ತಿಳಿಯದಿದ್ದರೂ ಸುಮ್ಮನೆ ತಲೆಯಾಡಿಸಿದೆ. ಅವಳ ಮುಖವನ್ನೇ ನೋಡುತ್ತಾ ಇದ್ದರಿಂದಲೋ ಅವಳೇ
ನಿಮ್ಮ ಊರು ಯಾವುದು? ಏನು ಮಾಡುತ್ತಿದ್ದೀರಾ? ಎಂದೆಲ್ಲಾ ಕೇಳಿದಳು ನಾನೂ ಮಂತ್ರಮುಗ್ಧನಂತೆ ಅವಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವಳನ್ನೇ ನೋಡುತಿದ್ದೆ.. ಅವಳೂ ತಲೆಯಾಡಿಸುತ್ತಾ ಕೇಳಿಸಿ ಕೊಳ್ಳುತ್ತಿದ್ದಳು , ಮಧ್ಯ ಅವಳು ಆಕಳಿಸಿದ್ದನ್ನು ನೋಡಿ 'ನಿಮಗೆ ನಿದ್ರೆ ಬರುತ್ತಿರಬಹುದು ಮಲಗಿ' ಎಂದೆ...ಅವಳು ಮುಗುಳು ನಕ್ಕು ಕಣ್ಣು ಮುಚ್ಚಿದಳು. ಅದನ್ನೇ ಕಾಯುತ್ತಿದ್ದ ನಾನು ನಿರ್ಭಯವಾಗಿ ಅವಳನ್ನೇ ನೋಡುತ್ತಾ ಅವಳಲ್ಲೇ ಸೇರಿ ಹೋದೆ. ಅದೆಂಥ ಸುಂದರ
ನಯನಗಳು , ಕೆಂಪಾದ ಅಧರ, ಮನ್ಮಥನ ಬಿಲ್ಲಿನಂತಿದ್ದ ಹುಬ್ಬುಗಳ ಮೇಲೆ ಅವಳ ಮುಂಗುರುಳುಗಳು ಸಂಚರಿಸುತ್ತಿದ್ದವು. ಅವಳ ಆ ಮುಂಗುರುಳುಗಳನ್ನು ನೋಡಿಯೇ ಮಾರುಹೋಗುವರು. ಆಗಲೇ ನನ್ನ ಮೊಬೈಲಿಂದ ' ಏ ಹವಾಯೇ ಜುಲ್ಫೊಮೆ ತೇರಿ ಗುಂ ಹೋ ಜಾಯೆ ...' ಎಂಬ ಹಾಡು ಗುನುಗಿತು..ಆ ಹಾಡಿಗೂ ವಾಸ್ತವದಲ್ಲಿ ಗಾಳಿಗೆ ಚಲಿಸುತ್ತಿದ್ದ ಅವಳ ಮುಂಗುರುಳುಗಳಿಗೂ ಎಂಥಾ ಸಂಗಮ ಎಂದುಕೊಂಡು ಮತ್ತೆ ಅವಳನ್ನೇ ನೋಡಲಾರಂಭಿಸಿದೆ...ಅವಳಲ್ಲೇ ಮುಳುಗಿದ್ದ ನನಗೆ ಇದ್ದಕ್ಕಿದ್ದಹಾಗೆ ಕಂಡದ್ದು ಪಕ್ಕದ ರೋ ನ ಐವತ್ತರ ಆಸುಪಾಸಿನ ಹೆಂಗಸು ನನ್ನನ್ನೇ ನೋಡುತ್ತಿರುವುದು..ಅವಳ ಸುಂದರತೆಯ ಮಧ್ಯ ಬಂದ ಅಡೆತಡೆಯನ್ನು ಅಷ್ಟಾಗಿ ಗಮನ ಕೊಡಲಿಲ್ಲ ನಾನು..ಸ್ವಲ್ಪ ಹೊತ್ತಿನಲ್ಲೇ ನಿದ್ರಾದೇವಿ ನನ್ನನ್ನು ಕರೆಯ ತೊಡಗಿದಳು ,ನಿದ್ರಾದೇವಿಯ ಮಡಿಲಿಗೆ ಜಾರಿದ ನನಗೆ ಬೆಳೆಗ್ಗೆ ಐದು ಘಂಟೆಗೆ ಎಚ್ಚರವಾಯಿತು..ಇನ್ನೂ ಕಟ್ಟಲು ಕವಿದೇ ಇತ್ತು.. ಪಕ್ಕದಲ್ಲಿ ನೋಡಿದರೆ ಆ ಸುಂದರಿ ಅಲ್ಲಿರಲಿಲ್ಲ. ಅವಳ ಹೆಸರೂ ಸಹ ನಾನು ಕೇಳಿರಲಿಲ್ಲ ಎಂಬುದು ನೆನಪಾಯಿತು, ರಿಸೆರ್ವ್ ಮಾಡಿಸಿದ್ದವರ ಹೆಸರು ಕಂಡಕ್ಟರ್ ಬಳಿ ಇದ್ದೆ ಇರುತ್ತದೆ ಆಮೇಲೆ ಕೇಳಿದರಾಯಿತೆಂದು ಕಿಟಕಿ ನೋಡುತ್ತಾ ಕುಳಿತೆ..ತುಸು ಹೊತ್ತಿನಲ್ಲೇ ಆದಿತ್ಯ ಕತ್ತಲನ್ನು ಸೀಳಿ ಬಂದ. ಶಿವಮೊಗ್ಗೆಯಲ್ಲಿ ಬಸ್ಸೂ ನಿಂತಿತು..ನನ್ನ ಲಗೇಜಿನೊಂದಿಗೆ ಎಲ್ಲರೂ ಇಳಿದ ಮೇಲೆ ಇಳಿದೆ. ಸಮಯ ವ್ಯಯ ಮಾಡದೆ ಸೀದಾ ಕಂಡಕ್ಟರ್ ಬಳಿ ಹೋಗಿ ಅವರ ಬಳಿ ಇದ್ದ ಪ್ರಯಾಣಿಕರ ಮಾಹಿತಿ ಪುಸ್ತಕ ಕೇಳಿ ಪಡೆದೆ .ಮೊದಲು ಹಿಂಜರಿದರೂ ಕೊನೆಗೆ ಪುಸ್ತಕವನ್ನು ನನ್ನ ಕಯ್ಯಲ್ಲಿತ್ತರು ,ಅವಳಂತೆ ಅವಳ ಹೆಸರೂ ಸುಂದರವಾಗಿರಬಹುದೆಂದು ನನ್ನ ಸೀಟ್ ಪಕ್ಕದ ಸೀಟಿನ ಹೆಸರನ್ನು ನೋಡಿದೆ..ನನ್ನ ಆಶ್ಚರ್ಯಕ್ಕೆ ಸೀಮೆಯೇ ಇರಲಿಲ್ಲ , ಏಕೆಂದರೆ ಅಲ್ಲಿದದ್ದು ಒಬ್ಬ ಗಂಡಸಿನ ಹೆಸರು....ಅವಸರ ಅವಸರವಾಗಿ ಹೋಗಿ ನಾನು ನೋಡಿದ್ದರಲ್ಲಿ ಏನೋ ತಪ್ಪಿರಬಹುದೆಂದು ಕಂಡಕ್ಟರ್ ಬಳಿ ಹೋಗಿ ಹುಡುಗಿಯ ಬಗ್ಗೆ ವಿಚಾರಿಸಿದೆ ಅದಕ್ಕವರು ಮಧ್ಯದಲ್ಲಿ ಯಾರೂ ಹತ್ತಲೇ ಇಲ್ಲ ಎಂದರು...ನನ್ನ ಎದೆ ಬಡಿತವೂ ಹಾಗೇ ಏರತೊಡಗಿತು ... ನಂಬಲಾಗದೆ ಅವಳ ಬಗ್ಗೆ ಯೋಚಿಸುತ್ತಾ ಆಟೋ ಹತ್ತಲು ಹೊರಡುತಿದ್ದಾಗ ಮತ್ತದೇ ಐವತ್ತರ ಹೆಂಗಸು ಬಂದು 'ಏನಪ್ಪಾ ಅದು ಯಾರ ಹತ್ತಿರ ಅಷ್ಟೊತ್ತು ಮಾತನಾಡುತಿದ್ದೆ?ಫೋನಿನಲ್ಲಿ ಮತಾಡುತಿದ್ದೆಯ ಅಥವಾ ನಿದ್ದೇಲಿ ಕನವರಿಸುತಿದ್ದೆಯಾ? ನಿನ್ನ ಪಕ್ಕದ ಸೀಟನ್ನೇ ನೋಡುತಿದ್ದೆಯಲ್ಲ? ಏನಾದರು ತೊಂದರೆ ಆಗಿತ್ತ?' ಎಂದು ಒಂದರ ಮೇಲೊಂದು ಪ್ರಶ್ನೆ ಕೇಳಿ ದಾಗಲೊಂತು ನನಗೆ ಭೂಮಿ ಅಲ್ಲೇ ಬಾಯಿ ಬಿಡಬಾರದೇ ಎನಿಸಿತು..ಹೇಗೋ ಸಮಾಧಾನದ ಉತ್ತರಗಳನ್ನು ನೀಡಿ ಹೆಂಗಸನ್ನು ಅಟ್ಟಿದೆ..ನಾನು ಏನೇ ಹೇಳಿದರೂ ಯಾರು ನಂಬುತ್ತಾರೆ?ಅದೂ ಆ ಹುಡುಗು ಅಲ್ಲ ಅಲ್ಲ ಮುಂಗುರುಳ ಸುಂದರುಯ ಬಗ್ಗೆ ...ನಿಜ ಹೇಳಬೇಕೆಂದರೆ ನನಗೆ ಇನ್ನೂ ಆ ಭಯಾನಕ ಪ್ರಯಾಣವನ್ನು ನೆನಪಿಸಿಕೊಂಡರೆ ಕಳು ಕುಸಿದಂತಾಗುತ್ತದೆ.. ಅದೇನು ನನ್ನ ಭ್ರಮೆಯೋ?ಅಥವಾ........ಈ ಸಂಗತಿ ನದೆದಾಗಿನಿಂದಲೂ ನಾನು ರಾತ್ರಿ ಪ್ರಯಾಣಿಸುವುದನ್ನೇ ಬ್ರೇಕ್ ಮಾಡಿದೆ......